31, October 2025

ದಾಸ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ:

Author(s): ಡಾ.ಶಿವಕುಮಾರ್.ಜಿ.ಎನ್.

Authors Affiliations:

ಸಹಾಯಕ ಪ್ರಾಧ್ಯಾಪಕರು, ಆಚಾರ್ಯ ಬೆಂಗಳೂರು ಬಿ ಸ್ಕೂಲ್, ಬೆಂಗಳೂರು -೯೧

DOIs:10.2018/SS/202510014     |     Paper ID: SS202510014


Abstract
Keywords
Cite this Article/Paper as
References
ಅಮರ‍್ತ: ಸಮಾಜದಲ್ಲಿ ಸಾಮಾಜಿಕ ಸಮಾನತೆಯ ಸಮಸ್ಯೆ ಇತ್ತೀಚಿನ ಸಮಸ್ಯೆಯಲ್ಲ.ಶತ ಶತಮಾನಗಳ ಕರಾಳ ಪಿಡುಗು. ಮೂಡನಂಬಿಕೆ, ಜಾತಿ , ವರ್ಗ-ವರ್ಣ, ಲಿಂಗತಾರತಮ್ಯ, ಅಸ್ಪ್ರಶ್ಯತೆ, ಬಡವ-ಬಲ್ಲಿದ ಹೀಗೆ ಹತ್ತಾರು ಅಂಶಗಳ ಹಿನ್ನೆಲೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದರು.ಇದನ್ನು ಮನಗಂಡ ಬುದ್ದಿಜೀವಿಗಳು ಹದಗೆಟ್ಟಿದ್ದ ವಾತಾವರಣವನ್ನು ಸುಚಿಗೊಳಿಸುವುದರ ಮೂಲಕ ಸಮಾನತೆಯ ಬೀಜಾಂಕುರಕ್ಕೆ ನಾಂದಿ ಹಾಡಿದರು. ಪ್ರಸ್ತುತ ಸಮಾಜದಲ್ಲಿ ರಾರಾಜಿಸುತ್ತಿರುವ ಬಹುತೇಕ ಎಲ್ಲಾ ಸಮಸ್ಯೆಗಳು ಹನ್ನೆರಡನೇ ಶತಮಾನದಲ್ಲಿಯೇ ಪಾರುಪತ್ಯವನ್ನು ಮೆರೆದಿದ್ದವು.ಅವುಗಳ ವಿರುದ್ಧ ಹೋರಾಡಿ ಸಮತಾ ಭಾವಕ್ಕೆ ಸಮಾಜವನ್ನು ಅಣಿಗೊಳಿಸಿದ್ದರು.ಆದರೆ ದುರಾದೃಷ್ಟವೋ ,ಜನರ ತಿಳುವಳಿಕೆ ಹೀನವೋ ಎಲ್ಲಾ ಕಂದಕಗಳು ವಚನಕಾರರ ತರುವಾಯ ಮುಂದುವರೆಯಲ್ಪಟ್ಟವು. ಹಾಗಾಗಿ ಮತ್ತೆ ಸಮಾಜವನ್ನು ಮರು ಸೃಷ್ಟಿಸುವ, ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಕೀರ್ತನಾಕಾರರು ಹೊತ್ತರು. ಶಿವಶರಣರ ತತ್ವ ಸಿದ್ಧಾಂತಗಳನ್ನು ಆಧರಿಸಿ ಹದಿನಾರನೆಯ ಶತಮಾನದಲ್ಲಿ ಬೆಳಕಿಗೆ ಬಂದುದು ಕೀರ್ತನಾ ಸಾಹಿತ್ಯ. ಶ್ರೀ ವ್ಯಾಸರಾಯರಿಂದ ಅಂಬೆ ಕಾಲಿಟ್ಟ ಈ ಪ್ರಕಾರ ಕನಕದಾಸ, ಪುರಂದರದಾಸ, ಜಗನ್ನಾಥದಾಸರಂಥ ಮೇಧಾವಿಗಳಿಂದ ಹುಲುಸಾಗಿ ಬೆಳೆಯಿತು. ಹರಿಯ ಭಕ್ತರಾಗಿದ್ದ ಕೀರ್ತನಾಕಾರರು ದೈವ ಭಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಜನಮಾನಸದಲ್ಲಿ ಭಕ್ತಿ ಭಾವವನ್ನು ಪುಟಿಸುವುದರ ಮೂಲಕ ಸಾಮಾಜಿಕ ಕಳಕಳಿಗೆ ಆಹ್ವಾನವಿತ್ತರು. ಜನರೊಟ್ಟಿಗೆ ರಕ್ತಗತವಾಗಿವಾಗಿದ್ದ ಜಾತಿ-ಮತ, ಲಿಂಗಭೇದ,ವರ್ಗತರತಮಗಳನ್ನು ತೊಡೆದು ಹಾಕಿ ಸಮಾನತೆಯ ತತ್ವವನ್ನು ಮರು ಸ್ಥಾಪಿಸಲು ಕಂಕಣ ಬದ್ಧರಾಗಿದ್ದರು.
ಪ್ರಮುಖ ಪದಗಳು:  ಕೀರ್ತನೆಗಳ ಆಶಯ, ಸಾಮಾಜಿಕ ಸಮಾನತೆ, ಜಾತಿಯ ನಿರ್ಮೂಲನೆ, ಪುರಂದರ ದಾಸ, ಕನಕದಾಸ.

ಡಾ.ಶಿವಕುಮಾರ್.ಜಿ.ಎನ್. (2025); ದಾಸ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ:, Shikshan Sanshodhan : Journal of Arts, Humanities and Social Sciences,      ISSN(o): 2581-6241,  Volume – 8,   Issue –  10,  Pp. 84-88.       Available on –   https://shikshansanshodhan.researchculturesociety.org/


Download Full Paper

Download PDF No. of Downloads:6 | No. of Views: 5