ಭದ್ರಾಚಲ ರಾಮದಾಸರು ಮತ್ತು ಪುರಂದರದಾಸರು – ಸಂಕೀರ್ಣ ರಚನೆಗಳ ವಿಶ್ಲೇಷಣೆ
Author(s): Pareekshith B Vashishta
Authors Affiliations:
Independent Researcher, Mysuru, India
DOIs:10.2018/SS/202510009     |     Paper ID: SS202510009ಅಮೂರ್ತ: ಭಾರತೀಯ ಭಕ್ತಿ ಪಂಥದ ಪ್ರಮುಖರಲ್ಲಿ ಪುರಂದರದಾಸರು ಮತ್ತು ಭದ್ರಾಚಲ ರಾಮದಾಸರಿಬ್ಬರೂ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ತಮ್ಮ ರಚನೆಗಳ ಮೂಲಕ ಜನರನ್ನು ಸರಿದಾರಿಗೆ ತರುವಲ್ಲಿ ಇಬ್ಬರೂ ಶ್ಲಾಘನೀಯ ಪ್ರಯತ್ನವನ್ನು ಮಾಡಿದ್ದಾರೆ. ದಾಸವರೇಣ್ಯ ಪುರಂದರದಾಸರು ಹರಿದಾಸರು, ಭದ್ರಾಚಲ ರಾಮದಾಸರು ಭದ್ರಾದ್ರಿ ರಾಮನನ್ನೇ ಸಂಪೂರ್ಣವಾಗಿ ನಂಬಿದವರು. ಈ ಮಹಿಮಾನ್ವಿತರು ಭಕ್ತಿಯ ಮಹಿಮೆಯನ್ನೇ ಪ್ರಮುಖವಾಗಿ ತಮ್ಮ ಕೀರ್ತನೆಗಳಲ್ಲಿ ಪ್ರಚುರಪಡಿಸಿದ್ದರೂ, ಈರ್ವರ ಅಗಾಧ ಪಾಂಡಿತ್ಯವೂ ಕೆಲವು ರಚನೆಗಳಲ್ಲಿ ಹೊರಬರುವುದುಂಟು. ಇವನ್ನು ನಾವು ಕೆಲವು ರಚನೆಗಳಲ್ಲಿ ವಿಶೇಷವಾಗಿ ಕಾಣುತ್ತೇವೆ. ಇಬ್ಬರೂ ಉದ್ದಾಮ ಪಂಡಿತರೂ, ಶಾಸ್ತ್ರಕೋವಿದರೂ, ಸಂಗೀತಜ್ಞರೂ ಆಗಿದ್ದರೆಂಬುದರಲ್ಲಿ ಅನುಮಾನವಿಲ್ಲ. ಈರ್ವರೂ ರಚಿಸಿರುವ ಕೆಲವು ಸಂಕೀರ್ಣ ರಚನೆಗಳನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗುತ್ತದೆ.
Pareekshith B Vashishta (2025); ಭದ್ರಾಚಲ ರಾಮದಾಸರು ಮತ್ತು ಪುರಂದರದಾಸರು – ಸಂಕೀರ್ಣ ರಚನೆಗಳ ವಿಶ್ಲೇಷಣೆ, Shikshan Sanshodhan : Journal of Arts, Humanities and Social Sciences, ISSN(o): 2581-6241, Volume – 8, Issue – 10, Pp. 58-60. Available on – https://shikshansanshodhan.researchculturesociety.org/
![SHIKSHAN SANSHODHAN [ ISSN(O): 2581-6241 ] Peer-Reviewed, Referred, Indexed Research Journal.](https://shikshansanshodhan.researchculturesociety.org/wp-content/uploads/SS-TITLE-HEADER.png)