ಪುರಂದರದಾಸರು ಮತ್ತು ತ್ಯಾಗರಾಜರು
Author(s): Dr. Jyothi Shankar
Authors Affiliations:
Associate Professor, Department of Research and Studies in Kannada, Karnataka State Open University, Mysuru
DOIs:10.2018/SS/202511002     |     Paper ID: SS202511002ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ದಾಸ ಸಾಹಿತ್ಯವೂ ಒಂದು. ಭಕ್ತಿಪಂಥವು ಭಾರತೀಯ ಸಂಸ್ಕೃತಿಯಲ್ಲಿ ಬಹುದೊಡ್ಡ ಮೈಲಿಗಲ್ಲು. ವಿಶೇಷವಾಗಿ ೧೫ನೇ ಶತಮಾನದಲ್ಲಿ ಬಂದಂತಹ ಹರಿದಾಸ ಭಕ್ತಿಪಂಥವು ಒಂದು ಕ್ರಾಂತಿಯನ್ನೇ ಉಂಟುಮಾಡಿತು. ಭಕ್ತಿ ಸಾಹಿತ್ಯದಿಂದ ದಾಸರು ಜನರಿಗೆ ಹತ್ತಿರವಾಗುವುದರ ಜೊತೆಗೆ ತಮ್ಮ ಸಾಹಿತ್ಯದ ಮೂಲಕ ಸಮಾಜ ತಿದ್ದುವ ಕೆಲಸವನ್ನೂ ಮಾಡಿದ್ದಾರೆ. ಹೀಗೆ ಬಂದಂತಹ ದಾಸರಲ್ಲಿ ಪುರಂದರದಾಸರು ಪ್ರಮುಖರು. ಅವರು ಸಂಗೀತ ಮತ್ತು ಸಾಹಿತ್ಯ ಎರಡರಲ್ಲೂ ಪರಿಣಿತಿ ಹೊಂದಿದ್ದರಿಂದ ಮುಂಬರುವ ಸಂಗೀತಜ್ಞರಿಗೆ ಮತ್ತು ಸಾಹಿತ್ಯಾಸಕ್ತರಿಗೆ ದಾರಿಯನ್ನು ಹಾಕಿಕೊಟ್ಟಿದ್ದಾರೆ. ಅದೇ ಪಂಕ್ತಿಯಲ್ಲಿ ಬಂದವರು ಮತ್ತೊಬ್ಬ ಶ್ರೇಷ್ಠ ಕವಿಗಳೂ, ವಾಗ್ಗೇಯಕಾರರೂ ಆದ ಶ್ರೀತ್ಯಾಗರಾಜರು. ಪುರಂದರದಾಸರಂತೆಯೇ ಭಕ್ತಿ ಸಾಮ್ರಾಜ್ಯದಲ್ಲಿಯೇ ಅನಭಿಷಿಕ್ತ ದೊರೆಗಳಾಗಿ ಮೆರೆದಿದ್ದಾರೆ. ಪುರಂದರದಾಸರಿಂದ ಪ್ರಭಾವಿತರಾಗಿ ಶ್ರೀತ್ಯಾಗರಾಜರು ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಕೃತಿಗಳ ಮೂಲಕ ಅಗ್ರಪಂಕ್ತಿಯಲ್ಲಿ ಇರುವಂತಹ ವಾಗ್ಗೇಯಕಾರರಲ್ಲಿ ತ್ಯಾಗರಾಜರೂ ಕೂಡ ಒಬ್ಬರು.
Dr. Jyothi Shankar (2025); ಪುರಂದರದಾಸರು ಮತ್ತು ತ್ಯಾಗರಾಜರು , Shikshan Sanshodhan : Journal of Arts, Humanities and Social Sciences, ISSN(o): 2581-6241, Volume – 8, Issue – 11, Pp. 6-13. Available on – https://shikshansanshodhan.researchculturesociety.org/
- ತ್ಯಾಗರಾಜ, ಪ್ರೊ. ಸಾ. ಕೃ. ರಾಮಚಂದ್ರ ರಾವ್, ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು, ೧೯೭೩
- ಪುರಂದರ ಸಾಹಿತ್ಯ ದರ್ಶನ ಸಂಪುಟ ೧-೪, ವಿದ್ಯಾಲಂಕಾರ ಪ್ರೊ. ಸಾ. ಕೃ. ರಾಮಚಂದ್ರ ರಾವ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೮೫
- ಶ್ರೀ ತ್ಯಾಗರಾಜ ಕೃತಿಮಂಜರಿ ಸಂಪುಟ ೧ & ೨, ಡಾ. ವಿ. ಎಸ್. ಸಂಪತ್ಕುಮಾರಾಚಾರ್ಯ, ಡಿ. ವಿ. ಕೆ. ಮೂರ್ತಿ ಪ್ರಕಾಶನ, ಮೈಸೂರು, ೨೦೦೯
- ನಮ್ಮ ಸಂಗೀತ ಮತ್ತು ವಾಗ್ಗೇಯಕಾರರು, ವಿದ್ಯಾಲಂಕಾರ ಪ್ರೊ. ಸಾ. ಕೃ. ರಾಮಚಂದ್ರ ರಾವ್, ಸುರಮಾ ಪ್ರಕಾಶನ, ಬೆಂಗಳೂರು, ೨೦೧೪
- ಹರಿದಾಸ ಸಾಹಿತ್ಯ ಸಾರ, ಜಿ ವರದರಾಜರಾವ್, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೧೫
- Collected Writings on Indian Music, Vol I – III, Dr V Raghavan, Dr V Raghavan Centre for Performing Arts, Chennai, 2020
![SHIKSHAN SANSHODHAN [ ISSN(O): 2581-6241 ] Peer-Reviewed, Referred, Indexed Research Journal.](https://shikshansanshodhan.researchculturesociety.org/wp-content/uploads/SS-TITLE-HEADER.png)